ವುಮೆನ್ಸ್ ಪ್ರೀಮಿಯರ್ ಲೀಗ್​ಗೆ ಉಮಾ ಕಾಶ್ವಿ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಉಮಾ, WPLನ ಮುಂಬರುವ ಸೀಸನ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದು ಸಹ ಕೇವಲ 15ನೇ ವಯಸ್ಸಿನಲ್ಲಿ ಎಂಬುದು ವಿಶೇಷ! ಇದರ ಬೆನ್ನಲ್ಲೇ, "ಯಾರು ಈ ಉಮಾ ಕಾಶ್ವಿ?" ಎಂಬ ಕುತೂಹಲದ ಪ್ರಶ್ನೆಯೊಂದು ಎಲ್ಲರಲ್ಲೂ ಮೂಡಿದೆ.