ಪುಸ್ತಕದ ಪುಟಗಳಲ್ಲಿ ವಿಜ್ಞಾನವನ್ನ ಓದುವುದಕ್ಕೂ, ಅದೇ ವಿಜ್ಞಾನವನ್ನ ಸ್ವತಃ ಪ್ರಯೋಗಗಳ ಮೂಲಕ ಕಂಡುಹಿಡಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಂದು ಮಗು ಕಾಮನಬಿಲ್ಲು ಹೇಗೆ ಮೂಡುತ್ತದೆ ಎಂಬುದನ್ನು ಪಾಠದಲ್ಲಿ ಓದುವುದಕ್ಕಿಂತ, ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನದ ಮೂಲಕ ಅದನ್ನ ಪ್ರಾಯೋಗಿಕವಾಗಿ ಅರ್ಥಮಾಡಿಕೊಂಡಾಗ ಅದರಲ್ಲಿನ ಕುತೂಹಲ ಇನ್ನಷ್ಟು ಹೆಚ್ಚುತ್ತದೆ.