ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ್ದ ದಾಳಿಕೋರರು ರಣ್​​ಬೀರ್ ಕಪೂರ್ ಮೇಲೂ ದಾಳಿಗೆ ಯೋಜನೆ ಹಾಕಿದ್ದು, ರಣ್​ಬೀರ್ ಕಪೂರ್ ಅವರ ಮನೆಯ ಬಳಿ ಬಂದು ವೀಕ್ಷಿಸಿ ತೆರಳಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆ ಪೊಲೀಸರು ರಣ್​​ಬೀರ್ ಕಪೂರ್ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ.