ಮಾಜಿ ಪತ್ನಿಯ ಮದುವೆಗೆ ತಂದೆಯೊಬ್ಬರು ತಮ್ಮ ಮಗನನ್ನು ಕರೆತಂದ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಯಿಯನ್ನು ಭೇಟಿಯಾಗಲು ಹಿಂದೇಟು ಹಾಕುತ್ತಿದ್ದ ಮಗನನ್ನು ತಂದೆ ವೇದಿಕೆಯತ್ತ ಕರೆದೊಯ್ದು, ಹೊಸ ದಂಪತಿಗೆ ಶುಭ ಹಾರೈಸುವಂತೆ ಮಾಡಿದ್ದಾರೆ. ಮಗನನ್ನು ಕಂಡ ತಾಯಿ ಕಣ್ಣೀರಿಟ್ಟು ಅಪ್ಪಿಕೊಂಡಿದ್ದು, ಹಲವರ ಮನ ಮುಟ್ಟಿದೆ.