ಉಯ್ಯಾಲೆ ಆಡುವುದು ಮಕ್ಕಳಿಗೆ ಮಾತ್ರ ಸೀಮಿತವಾದ ಆಟವಲ್ಲ. ದೊಡ್ಡವರೂ ಬಿಡುವಿನ ಸಮಯದಲ್ಲಿ ಸುರಕ್ಷಿತವಾಗಿ ಉಯ್ಯಾಲೆ ಆಡುವ ಮೂಲಕ ದೇಹವನ್ನು ಚಟುವಟಿಕೆಯಿಂದ ಇಟ್ಟುಕೊಳ್ಳಬಹುದು. ಜೊತೆಗೆ ಮನಸ್ಸಿಗೂ ಒಂದಷ್ಟು ನೆಮ್ಮದಿ ಮತ್ತು ಸಂತೋಷ ಪಡೆಯಬಹುದು. ಬನ್ನಿ ಉಯ್ಯಾಲೆ ಆಡುವುದರಿಂದ ಸಿಗುವ ಆರೋಗ್ಯ ಲಾಭಗಳೇನು? ಎಂದು ತಿಳಿದುಕೊಳ್ಳೋಣ.