ಪ್ರತಿದಿನ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದ್ದರೆ, ಈ ಬ್ರಾಹ್ಮಣ ಶೈಲಿಯ ಸಾಂಬಾರ್ ಮಾಡಿ ನೋಡಿ. ಈ ಸಾಂಬಾರ್ ಅನ್ನು ಬಿಸಿಬಿಸಿಯಾದ ಅನ್ನದ ಜೊತೆ ತುಪ್ಪ ಸೇರಿಸಿಕೊಂಡು ತಿಂದರೆ ತುಂಬಾ ರುಚಿಯಾಗಿರುತ್ತದೆ. ಅಷ್ಟಕ್ಕೂ ಈ ಸಾಂಬಾರ್ ಮಾಡಲು​ ಏನೆಲ್ಲಾ ಸಾಮಗ್ರಿಗಳು ಬೇಕು? ಇದನ್ನು ಮಾಡುವ ವಿಧಾನ ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.