ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ₹70,000 ಪಾವತಿಸಿ PS5 ಗೇಮಿಂಗ್ ಕನ್ಸೋಲ್ ಖರೀದಿಸಿದ ಗ್ರಾಹಕನಿಗೆ ಸೋನಿ ಕಂಪನಿಯು ವಾರಂಟಿ ನೀಡಲು ನಿರಾಕರಿಸಿದೆ. ಮಾರಾಟಗಾರರು ಅಧಿಕೃತ ಡೀಲರ್ ಅಲ್ಲದ ಕಾರಣ ಈ ಸಮಸ್ಯೆ ಎದುರಾಗಿದ್ದು, ಸ್ವಿಗ್ಗಿ ಕೂಡ ಜವಾಬ್ದಾರಿಯಿಂದ ಜಾರಿಕೊಂಡಿದೆ. ಇದರಿಂದ ಕಂಗಾಲಾದ ಗ್ರಾಹಕ ಇದೀಗ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.