ಬಿಗ್​​ಬಾಸ್​​ನ ಹೊಸ ಪ್ರೋಮೊ ರಿಲೀಸ್ ಆಗಿದ್ದು, ಸುದೀಪ್ ಅವರು ಶನಿವಾರದ ಎಪಿಸೋಡಿಗೆ ಸಂಪೂರ್ಣ ಸಜ್ಜಾಗಿ ಬಂದಿದ್ದಾರೆ. ದಾಖಲೆಗಳ ಸಮೇತ ಎಂಟ್ರಿ ಕೊಟ್ಟಿದ್ದಾರೆ. ಮಾತ್ರವಲ್ಲ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗೆ ಹೇಗೆ ಪಾಠ ಕಲಿಸಬೇಕು ಅಂತ ನಮ್ಮಪ್ಪನಾಣೆ ನನಗೆ ಗೊತ್ತಿದೆ’ ಎಂದು ಗರಂ ಆಗಿ ಹೇಳಿದ್ದಾರೆ.