ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದ ಮೂವರು ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಅನಿಲ್ ಪಂಡಿತ್ ಎಂಬಾತನ ಆಡಿಯೋ ವೈರಲ್ ಆಗಿದ್ದು, ಸಲ್ಮಾನ್ ಖಾನ್ ಕ್ಷಮೆಯಾಚಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಬಾಲಿವುಡ್ ಮಂದಿ ದಾವೂದ್ ಹಣದಿಂದ ಸಿನಿಮಾ ಮಾಡುತ್ತಾರೆ ಎಂದು ಆತ ಗಂಭೀರ ಆರೋಪ ಮಾಡಿದ್ದಾನೆ.