ಪ್ರಚಾರದ ದೊಡ್ಡ ವ್ಯವಸ್ಥೆಗಳೇ ಇಲ್ಲದ ಕಾಲದಲ್ಲಿ ತಮ್ಮ ಪ್ರತಿಭೆ ಮತ್ತು ಜನರ ಪ್ರೀತಿಯಿಂದಲೇ ಚಿತ್ರಮಂದಿರಗಳನ್ನು ತುಂಬಿಸಿದ್ದ ಡಾ. ರಾಜ್‌ಕುಮಾರ್ ಅವರ ಜನಪ್ರಿಯತೆ ಎಂತಹದ್ದು ಎಂಬುದಕ್ಕೆ ಅವರ ಸಿನಿಮಾಗಳ ಮರುಬಿಡುಗಡೆಯ ಕ್ರೇಜ್ ಕೂಡ ಸಾಕ್ಷಿಯಾಗಿದೆ. 50 ವರ್ಷಗಳ ಹಿಂದಿನ ಚಿತ್ರಗಳಿಗೂ ಇಂದಿಗೂ ಪ್ರೇಕ್ಷಕರಿಂದ ಬೇಡಿಕೆ ಇದೆ.