ನವದೆಹಲಿ: ಮಹಾದೇವ್ ಆ್ಯಪ್ ಮೂಲಕ ನಡೆಯುತ್ತಿದ್ದ ಅಕ್ರಮ ಬೆಟ್ಟಿಂಗ್ ಜಾಲದ ಕಿಂಗ್‌ಪಿನ್‌ ಸೌರಭ್ ಚಂದ್ರಕರ್‌ನನ್ನ ಓಮನ್‌ನಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ತಿಳಿಸಿದೆ. ಸೋಮವಾರ (ನ.2 ರಂದು) ಆತನನ್ನ ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಸಿಬಿಐ ಹಾಜರುಪಡಿಸಲಾಗುತ್ತದೆ.