ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ದೀಪಿಕಾ ಅವಳಿ ಸಹೋದರಿಯರು ಎಂಬ ಮಹಾಸತ್ಯ ಬಯಲಾಗಿದೆ. ಅಪಘಾತಕ್ಕೀಡಾಗಿದ್ದ ಭೂಮಿಕಾಳನ್ನು ಮಲ್ಲಿ ರಕ್ಷಿಸಿದ್ದು, ಜೈದೇವ್ ಮತ್ತು ಶಕುಂತಲಾ ಅವರ ಸಂಚು ಅಂತ್ಯಗೊಳ್ಳುವ ಹಂತ ತಲುಪಿದೆ. ಸತ್ಯ ತಿಳಿದ ಈ ಸಹೋದರಿಯರು ಮುಂದೇನು ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.