ಒಳ್ಳೆಯ ಕೆಲಸಗಳನ್ನ ಮಾಡಲು ವಯಸ್ಸು ಅಥವಾ ಸಂಪತ್ತಿನ ಅಗತ್ಯವಿಲ್ಲ, ಬದಲಾಗಿ ಇತರರಿಗೆ ಸಹಾಯ ಮಾಡಬೇಕೆಂಬ ಶುದ್ಧ ಮನಸ್ಸಿದ್ದರೆ ಸಾಕು. ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಅಣ್ಣ-ತಂಗಿ ಜೋಡಿಯಾದ ರೋಹನ್ ಸತೀಜಾ ಹಾಗೂ ಅನ್ಯಾ ಸತೀಜಾ ಈ ಮಾತನ್ನ ಅಕ್ಷರಶಃ ಸಾಬೀತುಪಡಿಸಿದ್ದಾರೆ.