ಬಿಗ್ ಬಾಸ್ ಕನ್ನಡ 13ರಲ್ಲಿ ಇದೀಗ ನೋವು, ದ್ವೇಷ, ಜಗಳಗಳ ಹೊಸ ಅಧ್ಯಾಯ ಆರಂಭವಾಗಿದೆ. ಮೂರು ವೈಲ್ಡ್ ಕಾರ್ಡ್ ಎಂಟ್ರಿಗಳ ಆಗಮನದಿಂದ ಮನೆಯ ಖದರ್ ಸ್ವಲ್ಪ ಸ್ವಲ್ಪವೇ ಬದಲಾಗುತ್ತಿದೆ. ಒಂದೆಡೆ ಇವರು ಬೆಂಕಿ ಹಚ್ಚಿ ಮಜಾ ನೋಡುವ ಕೆಲಸ ಮಾಡ್ತಿದ್ರೆ ಆ ಮೂಲಕ ಸ್ಪರ್ಧಿಗಳ ರಿಯಲ್ ಲೈಫ್ ಕಥೆಯೂ ಹೊರಬರುತ್ತಿದೆ. ಇದೀಗ ಜಗ್ಗಮಮ್ಮಿ ಬದುಕಿನ ದುರಂತವೊಂದು ತೆರೆದುಕೊಂಡಿದೆ.