ಲಡಾಖ್‌ನ ಲೇಹ್‌ನಲ್ಲಿ ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್ ಆಗಿದೆ. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಆಕೆ ಕೆಲಸದ ಸ್ಥಳಕ್ಕೂ ಮಗುವನ್ನು ಕರೆತರುತ್ತಾರೆ ಎನ್ನಲಾಗಿದೆ. ತಾಯಿಯ ಪರಿಶ್ರಮ, ಜವಾಬ್ದಾರಿ ಮತ್ತು ಬದುಕಿನ ಹೋರಾಟಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.