ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಟಿ ಸಾರಾ ಅಲಿ ಖಾನ್ ವಿರುದ್ಧ ಇಸ್ಲಾಮಿಕ್ ಧರ್ಮಗುರು ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಫತ್ವಾ ಹೊರಡಿಸಿದ್ದಾರೆ. ಶರಿಯಾ ಕಾನೂನಿನ ಪ್ರಕಾರ ಬೇರೆ ಧರ್ಮದ ಪೂಜೆ ಮಾಡುವುದು ಹರಾಮ್ ಮತ್ತು ಅಪರಾಧವಾಗಿದ್ದು, ಸಾರಾ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಬೇಕು ಎಂದು ಹೇಳಲಾಗಿದೆ.