ಬೆಂಗಳೂರು: ಏಜೀಸ್‌ (ಅಕೌಂಟೆಂಟ್‌ ಜನರಲ್‌ ಆಫೀಸ್‌ ರಿಕ್ರಿಯೇಷನ್‌ ಕ್ಲಬ್‌) ತಂಡದ ಆಟಗಾರರು ಗೋಲುಗಳ ಮಳೆಗರೆದರು. ಇದರಿಂದಾಗಿ ತಂಡವು 10ನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗುರುವಾರ 18–0 ಗೋಲುಗಳಿಂದ ಬಳ್ಳಾರಿ ಡಿವೈಇಎಸ್ ತಂಡವನ್ನು ಮಣಿಸಿತು.