ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಇಂದು ಕ್ಯಾಪ್ಟನ್ ಹಾಗೂ ಕೋ-ಪೈಲಟ್ ನಡುವೆ ನಡೆದ ಜಗಳ ಮತ್ತು ಚಾಕು ಇರಿತದ ಘಟನೆಯು ಹೈಜಾಕ್ ಆತಂಕವನ್ನು ಸೃಷ್ಟಿಸಿತು. ವರದಿಗಳ ಪ್ರಕಾರ, ಪೈಲಟ್‌ಗಳಲ್ಲಿ ಒಬ್ಬರು ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದು, ಮತ್ತೊಬ್ಬ ಪೈಲಟ್ ಹಾಗೂ ಪ್ರಯಾಣಿಕರು ಆತನನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ.