ಆ ತಾಯಿ ಶಾಲೆಯ ಮೆಟ್ಟಿಲನ್ನೇ ಹತ್ತಿರಲಿಲ್ಲ. ಆದರೆ ತನ್ನ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಕನಸನ್ನು ಮಾತ್ರ ಬಿಟ್ಟುಕೊಡಲಿಲ್ಲ. ಕುಟುಂಬವನ್ನು ಸಾಕಲು ದಿನಗೂಲಿ ಕೆಲಸ ಮಾಡಿದರು. ಬಳಿಕ ಮುಂಬೈನ ಕೊಳೆಗೇರಿಯಲ್ಲಿ ಕಸ ಹೆಕ್ಕುವ ಕೆಲಸವನ್ನೂ ಮಾಡಿದರು. ಹಸಿವು, ಬಡತನ, ಅನಾರೋಗ್ಯ, ಕಷ್ಟ... ಎಲ್ಲವನ್ನೂ ಎದುರಿಸಿದರು.