ನೇಪಾಳದ ಪಶ್ಚಿಮ ಭಾಗದ ಗೂರ್ಖಾ ಜಿಲ್ಲೆಯಲ್ಲಿ ಬುಧಿ ಗಂಡಕಿ ನದಿಯಲ್ಲಿ ಭಾನುವಾರ ಹಠಾತ್ ಪ್ರವಾಹ ಉಂಟಾಗಿ ಭಾರೀ ಹಾನಿ ಸಂಭವಿಸಿದೆ. ಪ್ರವಾಹದ ರಭಸಕ್ಕೆ ಮನೆಗಳು, ಎರಡು ತೂಗು ಸೇತುವೆಗಳು ಹಾಗೂ ಒಂದು ಉಕ್ಕಿನ ಸೇತುವೆ ಕೊಚ್ಚಿಹೋಗಿವೆ. 341 ಮೆಗಾವ್ಯಾಟ್ ಸಾಮರ್ಥ್ಯದ ಬುಧಿ ಜಲವಿದ್ಯುತ್ ಯೋಜನೆಯ ಶಿಬಿರಕ್ಕೂ ಹಾನಿಯಾಗಿದೆ.