ಜಿಂಬಾಬ್ವೆ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತದ ಶಫಾಲಿ ವರ್ಮಾ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಕ್ಯಾಚ್ ಕೈಬಿಟ್ಟ ಸಿಟ್ಟಿನಲ್ಲಿ ಚೆಂಡನ್ನು ನೆಲಕ್ಕೆ ಎಸೆದ ಕಾರಣಕ್ಕೆ ಅವರಿಗೆ ಅಧಿಕೃತ ಎಚ್ಚರಿಕೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಇದು ಐಸಿಸಿ ನಿಯಮ 2.2ರ ಮೊದಲ ಹಂತದ ಉಲ್ಲಂಘನೆಯಾಗಿದೆ, ಶಫಾಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.