ದುಬೈನಿಂದ ತೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನ ಅಪಹರಣ ಯತ್ನದ ಹಿಂದೆ ಓಮನ್ ಮೂಲದ ಸಹ-ಪೈಲಟ್‌ನ ಇಸ್ಲಾಮಿಕ್ ಮೂಲಭೂತವಾದವಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಕಾರಣರಾದವರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.