ರಣಜಿ ಟ್ರೋಫಿಯಲ್ಲಿ ವಿದರ್ಭದ ಹರ್ಷ್ ದುಬೆ ಮಧ್ಯಪ್ರದೇಶ ವಿರುದ್ಧ 9 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. 23.1 ಓವರ್‌ಗಳಲ್ಲಿ 53 ರನ್‌ ನೀಡಿ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್, ಎದುರಾಳಿ ತಂಡವನ್ನು 209 ರನ್‌ಗಳಿಗೆ ಆಲೌಟ್ ಮಾಡಲು ನೆರವಾದರು. ಈ ಅಮೋಘ ಸಾಧನೆ ವಿದರ್ಭ ಪರ ರಣಜಿ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.