ನೂತನ ಆಯ್ಕೆ ಸಮಿತಿಯ ಸಾರಥ್ಯ ವಹಿಸಿರುವ ಪರ್ವಿಂದರ್ ಅವಾನಾ ಅವರು ಭಾರತದ ಪರ ಎರಡು ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಡೆಲ್ಲಿ, ಇಂಡಿಯಾ 'ಎ' ಮತ್ತು ರೆಸ್ಟ್ ಆಫ್ ಇಂಡಿಯಾ ತಂಡಗಳನ್ನು ಪ್ರತಿನಿಧಿಸಿರುವ ಇವರು, 62 ಪ್ರಥಮ ದರ್ಜೆ ಪಂದ್ಯಗಳಿಂದ 191 ವಿಕೆಟ್‌ಗಳನ್ನು ಕಬಳಿಸಿದ್ದಾರೆ.