ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ 'ಈಟ್-ಇನ್ ಬೈ ಮಿನಿಟ್ಸ್' ಹೆಸರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಸೇವೆ ಆರಂಭಿಸಲು ಸಜ್ಜಾಗಿದೆ. ಸದ್ಯ ಬೆಂಗಳೂರಿನಲ್ಲಿ ತನ್ನ 8,000 ಉದ್ಯೋಗಿಗಳಿಗೆ ಈ ಸೇವೆಯನ್ನು ಪರೀಕ್ಷಿಸುತ್ತಿದ್ದು, ಶೀಘ್ರದಲ್ಲೇ ಸ್ವಿಗ್ಗಿ ಮತ್ತು ಜೊಮ್ಯಾಟೊಗೆ ನೇರ ಪೈಪೋಟಿ ನೀಡಲಿದೆ.