ಕೋವಿಡ್ ಸಾಂಕ್ರಾಮಿಕ ಆರಂಭವಾಗುವುದಕ್ಕೂ ಮುನ್ನ ಈ ನಟಿ ಹಾಗೂ ನಿರ್ಮಾಪಕ ನಾಗವಂಶಿ ನಡುವೆ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಕುರಿತು ಮಾತುಕತೆ ನಡೆದಿತ್ತಂತೆ. ಸುಮಾರು ಎರಡು ಅಥವಾ ಮೂರು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಇಬ್ಬರೂ ಚರ್ಚಿಸಿದ್ದರು. ಈ ಪೈಕಿ ಒಂದು ಸಿನಿಮಾಗಾಗಿ ನಾಗವಂಶಿ ಅವರು ಮುಂಗಡ ಹಣವನ್ನೂ ನೀಡಿದ್ದರು.