ನಿಖಿಲ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ಆಕ್ಷನ್ ಹೀರೋನಂತೆ ತೋರಿಸಲಾಗಿದೆ ಎಂದು ಹಿರಿಯ ನಟ ಮುಕೇಶ್ ಖನ್ನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಣಬೀರ್ ಕಪೂರ್ ಅಭಿನಯದ ಈ ಸಿನಿಮಾದಲ್ಲಿ ಅತಿಯಾದ ವಿಎಫ್‌ಎಕ್ಸ್ ಬಳಕೆಯನ್ನು ಪ್ರಶ್ನಿಸಿರುವ ಅವರು, ಶ್ರೀರಾಮನನ್ನು ಸಲ್ಮಾನ್ ಅಥವಾ ರಜನಿಕಾಂತ್ ತರಹ ಬಿಂಬಿಸಲಾಗಿದೆ ಎಂದು ಕಿಡಿಕಾರಿದ್ದಾರೆ.