ದಾವಣಗೆರೆ: ನಗರದ (Davanagere) ಬಾಡಾ ಕ್ರಾಸ್ ಬಳಿ ಅ.16 ರಂದು ಸಂಭವಿಸಿದ್ದ ಭೀಕರ ಕಾರು (Car) ಅಪಘಾತದಲ್ಲಿ (Accident) ಅಪ್ರಾಪ್ತ ಬಾಲಕರು ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕ ರಾಮ್‌ ತೇಜ್‌ನ ತಂದೆ ʻಪಬ್ಲಿಕ್‌ ಟಿವಿʼ ಜೊತೆ ಮಾತನಾಡಿದ್ದು, ಮಗನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.