ಡೆಹ್ರಾಡೂನ್: ಮುಸ್ಲಿಂ ಧರ್ಮದ (Muslim) 6 ಜನ ಗಂಗಾನದಿಯಲ್ಲಿ (Ganga River) ಪವಿತ್ರಸ್ನಾನ ಮಾಡಿ, ವೇದ ಮಂತ್ರ ಘೋಷಗಳೊಂದಿಗೆ ಹಿಂದೂ (Hindu) ಧರ್ಮ ಸ್ವೀಕರಿಸಿದ್ದಾರೆ. ಹರಿದ್ವಾರದ (Haridwar) ಚಂಡಿಘಾಟ್‌ನಲ್ಲಿ ಗಂಗಾಪೂಜೆ, ಹವನ ಸೇರಿದಂತೆ ನಡೆದ ಧಾರ್ಮಿಕ ವಿಧಿವಿಧಾನಗಳ ಬಳಿಕ ಈ ಆರೂ ಜನ ಹೊಸ ಹೆಸರು ಹೊಂದಿದ್ದಾರೆ.