ಲಕ್ನೋ: ಪ್ರೇಯಸಿಗೆ ತನ್ನೆಲ್ಲಾ ಆಸ್ತಿ ಬರೆಯುತ್ತಾನೆಂಬ ಭೀತಿಯಿಂದ ತಂದೆಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಔಷಧಿ ವ್ಯಾಪಾರಿ ವಿನೀತ್‌ ಮನೋಚಾ (60) ಕೊಲೆಯಾದ ವ್ಯಕ್ತಿ. ಇಂದಿರಾನಗರ ಪ್ರದೇಶದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಮನೋಚಾ ಮೃತದೇಹ ಪತ್ತೆಯಾಗಿತ್ತು.