ಉಡುಪಿ: ನಗರದ ಅಲೆವೂರು-ದೆಂದೂರುಕಟ್ಟೆ ಬಳಿ ಪೆಟ್ರೋಲ್ ಪಂಪ್ ಸಮೀಪ ನಿಲ್ಲಿಸಿದ್ದ ಬಸ್‌ ಶುಕ್ರವಾರ ಬೆಳಗಿನ ಜಾವ ಏಕಾಏಕಿ ಹೊತ್ತಿ ಉರಿದ ಘಟನೆ ನಡೆದಿದೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್‌ನ ಸಮೀಪವೇ ಇನ್ನೆರಡು ಬಸ್‌ಗಳು ಹಾಗೂ ಟೆಂಪೋ ನಿಲ್ಲಿಸಲಾಗಿತ್ತು.