ಜಪಾನ್‌ನ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಮೊದಲ ದಿನವೇ 11 ಪದಕ ಗೆದ್ದು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇದರಲ್ಲಿ 4 ಚಿನ್ನ, 5 ಬೆಳ್ಳಿ, 2 ಕಂಚಿನ ಪದಕಗಳಿವೆ. ಶೂಟಿಂಗ್‌ನಲ್ಲಿ ಮೋನಾ ಅಗರ್ವಾಲ್, ಲಾಂಗ್ ಜಂಪ್‌ನಲ್ಲಿ ನಿಶಾದ್ ಕುಮಾರ್ ಚಿನ್ನ ಗೆದ್ದರು. ಅವನಿ ಲೇಖರಾ ಬೆಳ್ಳಿ ಪಡೆದು 2028 ಪ್ಯಾರಾಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ.