ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಸ್ಟಾರ್‌ ನಟನೊಬ್ಬನ ಸಿನಿಮಾ ಶೂಟಿಂಗ್.‌ ಮುಟ್ಟಿದಲ್ಲಿ ತಟ್ಟಿದಲ್ಲಿ ಖರ್ಚು. ಬಲು ದುಬಾರಿ ಕ್ಯಾರವಾನ್.‌ ಕುಂತಲ್ಲಿ ನಿಂತಲ್ಲಿ ಸೇವೆಗೆ ಸರ್ವೆಂಟ್‌ಗಳು, ಅಸಿಸ್ಟೆಂಟ್‌ಗಳು, ವಿದೇಶಿ ಬ್ರಾಂಡಿನ ಅತಿ ದುಬಾರಿ ಉಡುಗೆ ಇತ್ಯಾದಿ. ಶೂಟಿಂಗ್‌ ನಡುವೆ ಬ್ರೇಕ್‌ ಬಂದಾಗ ಹೀರೋ ಬಲು ಅಪರೂಪಕ್ಕೆ ಕ್ಯಾರವಾನ್‌ ಬಿಟ್ಟು ಹೊರಗೆ ಕೂತಿದ್ದರು.