ಮನೆಯಂಗಳದ ಗಿಡಗಳಲ್ಲಿ ಹೂವುಗಳಿಗಿಂತ ಎಲೆಗಳೇ ಹೆಚ್ಚಾಗಿದ್ದರೆ, ಸೂರ್ಯನ ಬೆಳಕು ಮತ್ತು ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು. ಸರಿಯಾದ ಪ್ರಮಾಣದ ಬಿಸಿಲು, ಸಾವಯವ ಗೊಬ್ಬರ, ಮಿತವಾದ ನೀರು ಮತ್ತು ಒಣಗಿದ ಹೂವುಗಳನ್ನು ತೆಗೆಯುವ ಮೂಲಕ ಗಿಡಗಳಲ್ಲಿ ಹೆಚ್ಚು ಹೂವುಗಳನ್ನು ಪಡೆಯಬಹುದು. ತಜ್ಞರು ಸೂಚಿಸುವ ಈ ಸರಳ ವಿಧಾನಗಳಿಂದ ನಿಮ್ಮ ಕೈತೋಟವನ್ನು ಸುಂದರವಾಗಿಸಬಹುದು.