ಹಳ್ಳಿಗಳಿಂದ ಜನ ತಂಡೋಪತಂಡವಾಗಿ ಪಟ್ಟಣಗಳಿಗೆ ಬಂದು ‘ಪ್ರೇಮದ ಊರಲಿ’ ಸಿನಿಮಾ ನೋಡಿಕೊಂಡು ಹೋಗುತ್ತಿದ್ದಾರೆ. ಚಿತ್ರಮಂದಿರಗಳು ಕುಟುಂಬ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಬಿಡುಗಡೆ ಆದ ಮೊದಲ ವಾರ ಒಂದು ಕೋಟಿ ಗಳಿಸಲು ಒದ್ದಾಡಿದ್ದ ಸಿನಿಮಾ ಕಳೆದ ಎರಡು ವಾರದಲ್ಲಿ 40 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ದಿನಕಳೆದಷ್ಟು ಸಿನಿಮಾದ ಅಬ್ಬರ ಜೋರಾಗುತ್ತಲೇ ಸಾಗುತ್ತಿದೆ.