ಪ್ರಸಾರಕರ ಕೊರತೆಯಿಂದಾಗಿ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್) ಭವಿಷ್ಯ ಅತಂತ್ರವಾಗಿದ್ದು, ಈ ವರ್ಷ ಪಂದ್ಯಗಳು ನಡೆಯುವುದಿಲ್ಲ. ಜಿಯೋಸ್ಟಾರ್ ಸಂಸ್ಥೆಯು ಹಿಂದಿನ ಒಪ್ಪಂದದ ಅರ್ಧದಷ್ಟು ಮೊತ್ತವನ್ನು ಮಾತ್ರ ನೀಡಲು ಮುಂದಾಗಿರುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ. ಫುಟ್ಬಾಲ್ ಲೀಗ್ ಬಳಿಕ ಇದೀಗ ಕಬಡ್ಡಿ ಲೀಗ್ ಕೂಡ ಮಾಧ್ಯಮ ಹಕ್ಕಿನ ಸಮಸ್ಯೆಗೆ ಸಿಲುಕಿದೆ.