ಟಿಕೆಟ್ ಕಾರಣಕ್ಕೆ ಈ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ಪರಸ್ಪರ ಜಡೆ ಹಿಡಿದುಕೊಂಡು, ಮಾಂಗಲ್ಯ ಸರವನ್ನು ಸಹ ಹರಿದುಕೊಂಡು ಮಹಿಳೆಯರಿಬ್ಬರು ಕಿತ್ತಾಡಿಕೊಂಡಿದ್ದಾರೆ. ಪತಿಯರ ಮುಂದೆಯೇ ಇಬ್ಬರೂ ಮಹಿಳೆಯರು ಭೀಕರವಾಗಿ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಸಾಕಷ್ಟು ಮಂದಿ ಪುರುಷರು ಸ್ಥಳದಲ್ಲಿ ಇದ್ದರೂ ಸಹ ಯಾರೂ ಸಹ ಜಗಳ ಬಿಡಿಸುವ ಪ್ರಯತ್ನ ಮಾಡಿಲ್ಲ.