ಆಗ್ನೇಯ ಅರೇಬಿಯನ್ ಸಮುದ್ರ ವ್ಯಾಪ್ತಿಯಲ್ಲಿನ ಚಂಡಮಾರುತ ಪ್ರಸರಣದ ಪ್ರಭಾವದಿಂದಾಗಿ ದಕ್ಷಿಣ ಭಾರತವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಪಶ್ಚಿಮಕ್ಕೆ ಸಮೀಪಿಸುತ್ತಿರುವ ವಾಯುಭಾರ ಕುಸಿತದಿಂದಾಗಿ ಹಿಮಾಲಯ ಪ್ರದೇಶದಾದ್ಯಂತ ಮಳೆ, ಹಿಮಪಾತ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.