ಯಾದಗಿರಿ: ನಾಲ್ಕು ಜಿಲ್ಲೆಯ ಅನ್ನದಾತರ ಪಾಲಿಗೆ ಜೀವನಾಡಿಯಾಗಿರುವ ಬಸವಸಾಗರ ಜಲಾಶಯದಲ್ಲಿನ (Basavasagar Dam) ನೀರು ದಿನೇ ದಿನೇ ಕಡಿಮೆಯಾಗುತ್ತಿದೆ. ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ (Hunsagi) ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ ಅನ್ನದಾತರ ಪಾಲಿಗೆ ಜೀವನಾಡಿಯಾಗಿರುವ ಜಲಾಶಯ.