ಟಿ20 ಕ್ರಿಕೆಟ್ ಜಗತ್ತಿನಲ್ಲಿ ಸೂಪರ್‌ಸ್ಟಾರ್‌ಗಳೆಂದು ಬಿಂಬಿಸಿಕೊಂಡಿದ್ದ ಬಾಬರ್ ಆಝಂ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಆರು ಪ್ರಮುಖ ಆಟಗಾರರು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಡ್ರಾಫ್ಟ್‌ನಲ್ಲಿ ಫ್ರಾಂಚೈಸಿಗಳಿಂದ ಕಡೆಗಣನೆಗೆ ಒಳಗಾಗಿದ್ದಾರೆ. ಈ ಬೆಳವಣಿಗೆಯು ಪಾಕಿಸ್ತಾನಿ ಕ್ರಿಕೆಟಿಗರಿಗೆ ಭಾರಿ ಆಘಾತ ಹಾಗೂ ಮುಖಭಂಗವನ್ನುಂಟುಮಾಡಿದೆ.