ಇನ್ನೇನು ದಸರಾ ರಜೆ ಶುರುವಾಯ್ತು. ಮಕ್ಕಳನ್ನು ಕರ್ಕೊಂಡು ಎಲ್ಲಿಗಾದರೂ ಸಣ್ಣ ಟ್ರಿಪ್ ಹೋಗಬೇಕು ಅಂದ್ಕೊಂಡಿದ್ದೀರಾ? ಹಾಗಿದ್ರೆ ನಮ್ಮಲ್ಲೇ ಒಂದು ಸೂಪರ್ ಸ್ಪಾಟ್ ಇದೆ. ಹಿತ್ತಲ ಗಿಡ ಮದ್ದಲ್ಲ ಅನ್ನೋ ಹಾಗೆ ನಾವು ಯಾವಾಗಲೂ ಬೇರೆ ರಾಜ್ಯ, ದೇಶಗಳ ಬಗ್ಗೆ ಯೋಚನೆ ಮಾಡ್ತೇವೆ. ಆದ್ರೆ ನಮ್ಮ ಉಡುಪಿಯಲ್ಲೇ ಇರುವ ಈ ಐಲ್ಯಾಂಡ್ ಬಗ್ಗೆ ಅದೆಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲ.