ಆಕೆಗೆ ಈಗ ವಯಸ್ಸು 45. ಮಾತು ಬರೋಲ್ಲ. ಕಿವಿ ಕೇಳೋಲ್ಲ. ಗಂಡ, ಮಗ, ಸಂಸಾರ ಎಲ್ಲ ಇದೆ. 10ನೇ ತರಗತಿಯನ್ನು ಅರ್ಧದಲ್ಲೇ ಕಲಿಕೆ ನಿಲ್ಲಿಸಿದ್ದರು. ಈ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆಗೆ ಕೂತರೆ ಎಷ್ಟು ಮಾರ್ಕ್ ಪಡೆಯಬಹುದು? ಶೇ. 40? 50? ಊಹೂಂ. ಜಮ್ಮುವಿನ ರೇಣು ಹನ್ಸ್ ಛಲ ಹಿಡಿದು ಪರೀಕ್ಷೆ ಬರೆದು ಶೇ.82ರಷ್ಟು ಅಂಕ ಗಳಿಸಿದರು!