ಬೆಂಗಳೂರು: ಡಿಸೆಂಬರ್ 4ರಿಂದ 13ರವರೆಗೆ ನಮ್ಮ ಬೆಂಗಳೂರು ಊರಹಬ್ಬ `ಬೆಂಗಳೂರು ಜಾತ್ರೆ’ (Bengaluru Jathre) ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫ್ರೀಡಂ ಹಬ್ಬ ಈಗಾಗಲೇ ಜನರ ಮನಸು ಗೆದ್ದಿತ್ತು. ಬೆಂಗಳೂರು ಜನರಿಗಾಗಿ ಊರ ಹಬ್ಬ ಮಾಡಬೇಕು ಎಂದು ಸಿಎಂ ಕೂಡ ಹೇಳಿದ್ದರು.