ಗ್ರೇಟರ್ ನೋಯ್ಡಾ ಶಾಖೆಯಲ್ಲಿ ಗ್ರಾಹಕರ ಖಾತೆಗಳಿಂದ 11.24 ಕೋಟಿ ರೂ. ಹಣ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 12 ಉದ್ಯೋಗಿಗಳನ್ನು ಅಮಾನತುಗೊಳಿಸಿದೆ. ವಿವಿಧ ಗ್ರಾಹಕರ ಬ್ಯಾಂಕ್ ಅಕೌಂಟ್​ಗಳಿಂದ ಬೇರೆ ಬೇರೆ ಮೊತ್ತಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಬ್ಯಾಂಕ್ ಆಂತರಿಕ ತನಿಖೆ ನಡೆಸುತ್ತಿದೆ.