ಇಂಫಾಲ್: ಮಣಿಪುರದ (Manipur) ಕಾಮ್‌ಜಾಂಗ್ ಜಿಲ್ಲೆಯ ಗುಡ್ಡಗಾಡು ಗ್ರಾಮವೊಂದರಲ್ಲಿ ಕುಕಿ ಸಮುದಾಯಕ್ಕೆ ಸೇರಿದ 15 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದಾಗಿ ಅನೇಕ ನಾಗರಿಕರು ಅರಣ್ಯ ಪ್ರದೇಶಗಳಿಗೆ ಹಾಗೂ ಸಮೀಪದ ಸೇನಾ ಶಿಬಿರಕ್ಕೆ ಪಲಾಯನ ಮಾಡುವಂತಾಗಿದೆ. ಶನಿವಾರ ತಡರಾತ್ರಿ ಶಂಕಿತ ಉಗ್ರರು ಚಸ್ಸಾದ್ ಗ್ರಾಮದ ಮೇಲೆ ದಾಳಿ ನಡೆಸಿ, ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.