ಗಂಟೆಗಟ್ಟಲೆ ರೀಲ್ಸ್ ನೋಡುವಾಗ ಕುತ್ತಿಗೆಯನ್ನು ಬಾಗಿಸಿ ಕುಳಿತುಕೊಳ್ಳುವ ಅಭ್ಯಾಸ ಕುತ್ತಿಗೆ, ಭುಜ ಮತ್ತು ಬೆನ್ನಿನ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಿಸಬಹುದು. ಇದರಿಂದ ನೋವು, ಬಿಗಿತ ಮತ್ತು ಆಯಾಸ ಕಾಣಿಸಿಕೊಳ್ಳಬಹುದು. ಮೊಬೈಲ್ ಬಳಸುವಾಗ ಸರಿಯಾದ ಭಂಗಿ ಕಾಪಾಡಿಕೊಳ್ಳುವುದು, ವಿರಾಮ ತೆಗೆದುಕೊಳ್ಳುವುದು ಮತ್ತು ದೈಹಿಕ ಚಟುವಟಿಕೆ ಹೆಚ್ಚಿಸುವುದು ಮುಖ್ಯ.