ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ (Car) ಟೈರ್‌ ಸ್ಫೋಟಗೊಂಡು, ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಘಟನೆ ಚಿಕ್ಕಮಗಳೂರು (Chikkamagaluru) ನಗರದ ಕೋಟೆಕೆರೆಯಲ್ಲಿ ನಡೆದಿದೆ. ಟೈರ್‌ ಸ್ಫೋಟಗೊಳ್ಳುತ್ತಿದ್ದಂತೆ ವಿದ್ಯತ್‌ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಬಳಿಕ ಕೆರೆಗೆ ಹಾಕಿದ್ದ ಕಬ್ಬಿಣದ ಬೇಲಿ ಮುರಿದುಕೊಂಡು ಕೆರೆಗೆ ಬಿದ್ದಿದೆ.