ಬೆಂಗಳೂರು: ನಗರದಲ್ಲಿ(Bengaluru) ಸುರಿದ ಭಾರೀ ಮಳೆಯಿಂದಾಗಿ (Rain) ಗೊರಗುಂಟೆಪಾಳ್ಯ (Goraguntepalya) ಸಿಗ್ನಲ್‌ ಬಳಿ ಲಾರಿ ಮೇಲೆ ಬೃಹತ್‌ ಮರವೊಂದು (Tree) ಮುರಿದು ಬಿದ್ದಿದೆ. ಇದರಿಂದ ಸುಮ್ಮನಹಳ್ಳಿ – ತುಮಕೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗಿನ ಜಾವ 5:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.