ಮಂಗಳೂರು: ನಾಡಹಬ್ಬ ದಸರಾ ಮಂಗಳೂರು ಭಾಗದಲ್ಲೂ ಅದ್ಧೂರಿಯಾಗಿ ನಡೆಯುತ್ತದೆ. ಈ ವರ್ಷ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( KSRTC) ಮಂಗಳೂರು ಘಟಕದ ವತಿಯಿಂದ ಪ್ರವಾಸಿಗರಿಗೆ ಗುಡ್‌ನ್ಯೂಸ್ ನೀಡಿದೆ. ಐದು 'ದಸರಾ ವಿಶೇಷ ಏಕದಿನ ಪ್ರವಾಸ ಪ್ಯಾಕೇಜ್'‌ ಘೋಷಿಸಲಾಗಿದೆ. ಮಲೆನಾಡು, ಕರಾವಳಿ ಭಾಗದ ಐತಿಹಾಸಿಕ ಸುಂದರ ತಾಣಗಳನ್ನು ಒಂದು ದಿನದಲ್ಲಿ ನೋಡಬಹುದಾಗಿದೆ.