ನವದೆಹಲಿ: ದೀಪಾವಳಿ ಹಬ್ಬಕ್ಕೂ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮತ್ತೆ ಹೆಚ್ಚಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) ‘ತುಂಬಾ ಕಳಪೆ’ ವಿಭಾಗಕ್ಕೆ ತಲುಪಿದ್ದು, ಹಲವು ಪ್ರದೇಶಗಳಲ್ಲಿ 300ರ ಗಡಿ ದಾಟಿದೆ. ಜಹಾಂಗೀರ್‌ಪುರಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 417 ದಾಖಲಾಗಿದ್ದು, ಗಂಭೀರ ವಿಭಾಗಕ್ಕೆ ತಲುಪಿದೆ.